Home / News and Events / 67ನೇ ಸ್ವಾತಂತ್ರ್ಯ ದಿನಾಚರಣೆ

67ನೇ ಸ್ವಾತಂತ್ರ್ಯ ದಿನಾಚರಣೆ

ಬೆಳಗ್ಗೆ ಸುಮಾರು 8.45ಕ್ಕೆ ಸರಿಯಾಗಿ 67ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ವಾಗ್ದೇವಿ ಶಿಕ್ಷಣ ಮಹಾವಿದ್ಯಾಲಯದ (ಬಿ.ಇಡಿ) ಕಟ್ಟಡದಲ್ಲಿ ಸಂಸ್ಥೆ   ಅಧ್ಯಕ್ಷರಾದ ಶ್ರೀ ಜಗದೀಶ್ ಕೆ.ಎಸ್ ಇವರು ನೇರವೇರಿಸಿದರು. ಶ್ರೀಯುತ ನಾಗರಾಜ ಎಂ.ಜಿ, ಸಮಾಜ ಶಾಸ್ತ್ರ ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೀರ್ಥಹಳ್ಳಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ  ಸ್ವಾತಂತ್ರ್ಯೋತ್ಸವದ ಕುರಿತು ನಾವೆಲ್ಲರೂ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಪಡೆದುಕೊಂಡಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಇನ್ನೂ ಪಡೆಯಬೇಕಾಗಿದೆ ಎಂದು ಅರ್ಥ ಪೂರ್ಣವಾಗಿ  ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಮುಖ್ಯ ಅತಿಥಿಗಳ ಭಾಷಣ ಮಾಡಿದರು. ಹಾಗೂ ಶ್ರೀಯುತ ಸದಾನಂದ, ಮ್ಯಾನೇಜರ್, ಹೆಚ್.ಡಿ.ಎಫ್.ಸಿ, ಬ್ಯಾಂಕ್, ತೀರ್ಥಹಳ್ಳಿ ಶಾಖೆ ಇವರು ಸಹ ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಒಂದೆರಡು ಹಿತನುಡಿಗಳನ್ನಾಡಿದರು. ವಾಗ್ದೇವಿ ಶಾಲೆಯ ವಿದ್ಯಾರ್ಥಿಗಳಿಗೆ ಹೆಚ್.ಡಿ.ಎಫ್.ಸಿ, ಬ್ಯಾಂಕ್, ತೀರ್ಥಹಳ್ಳಿ ಶಾಖೆ ಇವರ ವತಿಯಿಂದ ದಿನಾಂಕ:12/08/2013ರಂದು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಎಸ್.ಎಸ್.ಎಲ್.ಸಿ ಗರಿಷ್ಠ ಅಂಕ ಪಡೆದವರನ್ನು ನೆನಪಿನ ಕಾಣಿಕೆ  ನೀಡುವುದರ ಮೂಲಕ ಸನ್ಮಾನಿಸಲಾಯಿತು. ಹಾಗೂ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಾಲಚಂದ್ರ ಮಡಿವಾಳ ಮತು ಉಪನ್ಯಾಸಕ ವರ್ಗದವರು, ವಾಗ್ದೇವಿ ಶಾಲೆಯ ಶಿಕ್ಷಕ ವೃಂದದವರು, ಮತ್ತು ಶಾಲಾ ವಿದ್ಯಾರ್ಥಿಗಳ ಪೋಷಕರು, ಬಿ.ಇಡಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Independance Day